Controversy Erupts Over The Birthplace Of Lord Hanuman | Public TV

2022-05-30 2

ರಾಮ ಭಕ್ತ ಹನುಮಂತನ ಜನ್ಮ ಸ್ಥಳ ಅಂದ್ರೆ ಸಾಕು ಕೊಪ್ಪಳ ಜಿಲ್ಲೆ ಗಂಗಾವತಿ ಸಮೀಪದ ಕಿಷ್ಕಿಂದಾ ಪ್ರದೇಶದ ಅಂಜನಾದ್ರಿ ಬೆಟ್ಟ ಅಂತಾ ಹನುಮ ಭಕ್ತರು ಒಪ್ಪುತ್ತಾರೆ. ಉತ್ತರ ಭಾರತದಿಂದಲೇ ಹೆಚ್ಚು ಭಕ್ತರನ್ನು ಹೊಂದಿದ್ದ ಅಂಜನಾದ್ರಿಬೆಟ್ಟ ದಿನದಿಂದ ದಿನಕ್ಕೆ ರಾಷ್ಟೀಯ ಮಟ್ಟದ ಪ್ರವಾಸಿತಾಣವಾಗಿ ಬೆಳೆಯುತ್ತಿರುವ ಬೆನ್ನಲ್ಲೇ ಮತ್ತೊಮ್ಮೆ ಜನ್ಮಸ್ಥಳ ಕಿಚ್ಚು ಹೊತ್ತಿಕೊಂಡಿದೆ. ಟಿಟಿಡಿ ಬಳಿಕ ಬೇರೆ ಬೇರೆ ಕಡೆಯಿಂದ ಹನುಮಂತನ ಜನ್ಮ ಸ್ಥಳದ ನಮ್ಮಲ್ಲಿದೆ ಎಂಬ ತಕರಾರು ಕೇಳಿಬರುತ್ತಿವೆ. ಇದೀಗ ಮಹಾರಾಷ್ಟ್ರದ ಸಂತರೊಬ್ಬರು ಹನುಮಂತ ಹುಟ್ಟಿದ್ದು ನಾಶಿಕ್ ಸಮೀಪದ ಅಂಜನೇರಿ ಬೆಟ್ಟದಲ್ಲಿ ಎಂದು ಕ್ಯಾತೆ ತೆಗೆದಿದ್ದಾರೆ. ಸದ್ಯ ಟಿಟಿಡಿ ತಣ್ಣಗಾಗಿದ್ದು, ಮಹಾರಾಷ್ಟ್ರ ಎದ್ದು ಕುಳಿತಿದೆ.

ಮಹಾರಾಷ್ಟ್ರದ ನಾಶಿಕ್ ಬಳಿಯ ಅಂಜನೇರಿ ಪರ್ವತವೇ ಹನುಮ ಜನ್ಮ ಸ್ಥಳ ಎಂದು ಸ್ವಾಮಿ ಅನಿಕೇತ ಶಾಸ್ತ್ರಿ ದೇಶಪಾಂಡೆ ಹೇಳಿಕೊಂಡಿದ್ದಾರೆ. ಮಹಾರಾಷ್ಟ್ರದ ನಾಸಿಕ್‌ನಿಂದ ತ್ರೈಯಂಬಕೇಶ್ವರ ರಸ್ತೆಯಲ್ಲಿ ಇರುವ ಅಂಜನೇರಿ ಬೆಟ್ಟದಲ್ಲಿ ಈ ಬಗ್ಗೆ ಚರ್ಚಿಸಲು ನಾಳೆ ಧರ್ಮ ಸಂಸತ್ ಸಭೆ ಆಯೋಜಿಸಲಾಗಿದೆಯಂತೆ. ಆಂಧ್ರದ ಟಿಟಿಡಿ ಖ್ಯಾತೆ ವಿರುದ್ಧ ಕೋರ್ಟ್ ಮೆಟ್ಟಿಲೇರಿ, ಟಿಟಿಡಿ ಬಾಯಿ ಮುಚ್ಚಿಸಿರೋ ಹಂಪಿಯ ಗೋವಿಂದನಂದಶ್ರೀಗಳು ಈ ಸಭೆಯಲ್ಲಿ ಭಾಗವಹಿಸಲು ನಾಸಿಕ್‌ಗೆ ಹೋಗಿದ್ದಾರೆ. ಇನ್ನು ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಸರ್ಕಾರ ೧೦೦ ಕೋಟಿ ಬಿಡುಗಡೆ ಮಾಡಿದೆ.

ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖ ಮತ್ತು ವರ್ಣಿನೆ ಇಂದಿಗೂ ಕರ್ನಾಟಕದ ಕಿಷ್ಕಿಂಧೆಗೆ ಹೋಲಿಕೆ ಆಗುತ್ತದೆ. ಆದಾಗ್ಯೂ ಹೀಗೆ ಪದೇ ಪದೇ ತಗಾತೆ ಕೇಳಿ ಬರುತ್ತಿದ್ದು ಕೇಂದ್ರ ಸರ್ಕಾರವೇ ಮಧ್ಯ ಪ್ರವೇಶಿಸಿ ವಿವಾದ ಇತ್ಯರ್ಥ ಮಾಡಬೇಕಿದೆ.

Controversy Erupts Over The Birthplace Of Lord Hanuman | Public TV


Watch Live Streaming On http://www.publictv.in/live